ದಿಶಾ ಮದನ್ ಭಾರತೀಯ ನಟಿ ಮತ್ತು ಸಾಮಾಜಿಕ ಮಾಧ್ಯಮ ವ್ಯಕ್ತಿತ್ವ ಆಗಿದ್ದಾರೆ. ಅವರು ಕನ್ನಡ ಭಾಷೆಯ ದೂರದರ್ಶನ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ತಮ್ಮ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. == ವೈಯಕ್ತಿಕ ಜೀವನ == ಇವರು ಶಶಾಂಕ್ ವಾಸುಕಿ ಗೋಪಾಲ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ವಿಯಾನ್ ಶಶಾಂಕ್ ವಾಸುಕಿ ಎಂಬ ಮಗನು 27 ಜುಲೈ 2019 ರಂದು ಜನಿಸಿದರು ಮತ್ತು ಅವಿರಾ ವಾಸುಕಿ ಎಂಬ ಮಗಳು 1 ಮಾರ್ಚ್ 2022 ರಂದು ಜನಿಸಿದರು . == ವೃತ್ತಿ ಜೀವನ == ದಿಶಾ ಮದನ್ ಡ್ಯಾನ್ಸಿಂಗ್ ಸ್ಟಾರ್‌ನ ಮೊದಲ ಸೀಸನ್‌ನೊಂದಿಗೆ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು. 2014 ರಲ್ಲಿ ಸುನಾಮಿ ಕಿಟ್ಟಿ ಜೊತೆಗೆ ಈ ಸೀಸನ್ ಪ್ರಶಸ್ತಿಯನ್ನು ಗೆದ್ದಿದ್ದರು. ಆದರೆ ಕನ್ನಡ ಕಿರುತೆರೆಗೆ ಬರುವ ಮೊದಲು ದಿಶಾ ಹಿಂದಿ ಕಿರುತೆರೆಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೀಸನ್ 4ರಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ 2014ರಲ್ಲಿ ಪ್ರಸಾರಗೊಂಡ ಕುಲವಧು ಎಂಬ ಕನ್ನಡ ಧಾರಾವಾಹಿಯಲ್ಲಿ ವಚನ ಪಾತ್ರವನ್ನು ನಿರ್ವಹಿಸಿದ್ದರು. ಆದರೆ, ತನ್ನ ತಂದೆಯ ವ್ಯವಹಾರದಲ್ಲಿ ಸಹಾಯ ಮಾಡಲು ಈ ಧಾರಾವಾಹಿಯನ್ನು ಅರ್ಧದಲ್ಲೇ ತೊರೆದರು . ಇವರು . ಎಂಬ ಆಪ್‌ನಲ್ಲಿ, ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದ ಮೊದಲ ಭಾರತೀಯರಾಗಿದ್ದರು . ಜುಲೈ 2018 ರ ಹೊತ್ತಿಗೆ ಇವರು 2.6 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು . 2018 ರಲ್ಲಿ, ಅವರು ಅರವಿಂದ್ ಅಯ್ಯರ್ ಅವರೊಂದಿಗೆ ಹೇಟ್ ಯು ರೋಮಿಯೋ ಎಂಬ ವೆಬ್ ಸರಣಿಯಲ್ಲಿ ನಟಿಸಲು ಸಿದ್ಧರಾಗಿದ್ದರು, ಅದು ಇನ್ನೂ ಬಿಡುಗಡೆಯಾಗಬೇಕಿದೆ . 2020 ರಲ್ಲಿ, ಬಿಡುಗಡೆಯಾದ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ಸುದ್ದಿ ವರದಿಗಾರರಾಗಿ ನಟಿಸಿದ್ದಾರೆ . ಹಂಬಲ್ ಪೊಲಿಟಿಷಿಯನ್ ನಾಗಾರಾಜ್ ಎಂಬ ವೆಬ್ ಸರಣಿಯ ಸೀಕ್ವೆಲ್‌ನಲ್ಲಿಯೂ ಅವರು ಪಾತ್ರವನ್ನು ನಿರ್ವಹಿಸಿದ್ದಾರೆ . == ಚಲನಚಿತ್ರಗಳ ಪಟ್ಟಿ == == ದೂರದರ್ಶನ == === ವೆಬ್ ಸರಣಿ === == ಉಲ್ಲೇಖಗಳು ==